ಓಮನ ನಿಯಮ: ಉಷ್ಣತೆ ಬದಲಾದಂತೆ ವಿದ್ಯುತ್ತು ಹರಿಯುತ್ತಿರುವಾಗ ವೋಲ್ಟೇಜಿಗೂ (ಗಿ) ವಿದ್ಯುತ್ಪ್ರವಾಹಕ್ಕೂ (I) ಇರುವ ಪ್ರಮಾಣಾಂಕ ಸ್ಥಿರವಾಗಿದೆ ಎಂದು ತಿಳಿಸುವ ನಿಯಮ (ಓಮ್ಸ್‌ ಲಾ). ಸಾಕೇತಿಕವಾಗಿ ಗಿ/I = ಖ. ಖ ಈ ಸ್ಥಿರಾಂಕ. ಉಷ್ಣತೆ ವ್ಯತ್ಯಾಸವಾಗದಂತೆ ಪದಾರ್ಥವನ್ನು ಇಟ್ಟಾಗ ಈ ನಿಯಮ ಪಾಲಿತವಾಗುವುದಾದರೂ ಇದು ಪದಾರ್ಥಗಳನ್ನು ಅವಲಂಬಿಸದೆ ಇರುವಂಥ ಭೌತ ನಿಯಮಗಳ ವಿಶೇಷ ಗುಂಪಿಗೆ ಸೇರಿಲ್ಲ.

ಎಲೆಕ್ಟ್ರಾನುಗಳು ಒಂದು ಪದಾರ್ಥದ ಮೂಲಕ ಪ್ರವಹಿಸುವಾಗ ಅದು ಪ್ರವಾಹದ ವಿರುದ್ಧ ಪ್ರದರ್ಶಿಸುವ ತಡೆಯೇ ಪದಾರ್ಥದ ರೋಧತ್ವ (ಖ) ಇದರ ಪ್ರಾಯೋಗಿಕ ಏಕಕವನ್ನು ಓಮ್ ಎಂದೇ ಹೆಸರಿಸಿ (1861) ವಿಜ್ಞಾನಿಗಳು ಓಮನಿಗೆ ಗೌರವ ಸಲ್ಲಿಸಿದ್ದಾರೆ. (ನೋಡಿ- ಓಮ್,-ಜಾರ್ಜ್-ಸೈಮನ್). 00 ಸೆಂ. ಉಷ್ಣತೆಯಲ್ಲಿ (106.3) ಸೆಂಮೀ. ಉದ್ದಕ್ಕೆ ಅಡ್ಡಕೊಯ್ತ (ಕ್ರಾಸ್ಸೆಕ್ಷನ್) ಒಂದೇ ಸಮನಾಗಿರುವಂತೆ ನಿಂತಿರುವ (14.4521) ಗ್ರಾಂ. ಪಾದರಸದ ಸ್ತಂಭ ಅನಿಶ್ಚಿತವಲ್ಲದ ವಿದ್ಯುತ್ಪ್ರವಾಹಕ್ಕೆ ಒಡ್ಡುವ ರೋಧತ್ವವನ್ನು ಅಂತರರಾಷ್ಟ್ರೀಯ ಓಮೆಂದು (ವ್ಯಾವಹಾರಿಕ ಓಮೆಂದು) ಒಪ್ಪಿಕೊಳ್ಳಲಾಗಿದೆ. (0.76) ಸೆಂಮೀ. ವ್ಯಾಸವಿರುವ (1) ಮೈಲಿ ಉದ್ದ ತಾಮ್ರದ ತಂತಿಗೆ ರೋಧತ್ವ ಉಪಸಮವಾಗಿ (0.6) ಓಮ್ ಇರುವುದೆಂದೂ (220) ವೋಲ್ಟ್‌ ವಿದ್ಯುತ್ ಒತ್ತಡದಲ್ಲಿ (200) ವಾಟ್ ಶಕ್ತಿಯ ವಿದ್ಯುದ್ದೀಪ ಉರಿಯುವಾಗ ಅದರ ರೋಧತ್ವ (242) ಓಮ್ ಇರುವುದೆಂದೂ ನೆನಪಿನಲ್ಲಿಟ್ಟರೆ ಒಂದು ಓಮಿನ ಪ್ರಮಾಣ ಎಷ್ಟೆಂದು ತಿಳಿಯಬಹುದು.

 
ಓಮನ ನಿಯಮ ಮೇಲುನೋಟಕ್ಕೆ ಬಲು ಸರಳವಾಗಿ ಕಾಣುತ್ತದೆ. ಆದರೆ ಓಮ್ ಮೊದಲು ಮಂಡಿಸಿದಾಗ ಜನರು ಇದನ್ನು ನಂಬಲಿಲ್ಲ. ಆ ಮಹೂರ್ತ ಬರಲು ಈ ವಿಜ್ಞಾನಿ (14) ವರ್ಷಗಳಷ್ಟು ದೀರ್ಘಕಾಲ ಅಜ್ಞಾತವಾಸ ಅನುಭವಿಸಬೇಕಾಯಿತು. 

ಓಮನ ನಿಯಮ ಎಲ್ಲ ಪದಾರ್ಥಗಳಿಗೂ ಅನ್ವಯಿಸುವುದಿಲ್ಲ. ತಾಮ್ರ, ಅಲ್ಯುಮಿನಿಯಂ, ಕಬ್ಬಿಣ, ಟಂಗ್ಸ್ಟನ್, ಕಂಚು ಮುಂತಾದ ವಿದ್ಯುದ್ವಾಹಕಗಳಲ್ಲಿ ಈ ನಿಯಮ ಸರಿಹೊಂದುತ್ತದೆ. ವಿರುದ್ಧ ವಿದ್ಯುಚ್ಚಾಲಕ ಶಕ್ತಿ (ಬ್ಯಾಕ್ ಎಲೆಕ್ಟ್ರೋಮೋಟೀವ್ ಫೋರ್ಸ್) ಇಲ್ಲದ ಕೆಲವು ವಿದ್ಯುದ್ವಿಭಜನೀಯಗಳಲ್ಲಿ (ಎಲೆಕ್ಟ್ರೋಲೈಟ್ಸ್‌) ವೋಲ್ಟೇಜ್ ಕಡಿಮೆ ಇದ್ದಾಗ ಓಮನ ನಿಯಮ ಪಾಲಿತವಾಗುವುದು.

ಓಮನ ನಿಯಮಕ್ಕೆ ಕೆಲವು ಮುಖ್ಯವಾದ ಅಪವಾದಗಳು: 
 (1) ವಿದ್ಯುತ್ ಪ್ರವಾಹದಿಂದ ಒಂದು ಪದಾರ್ಥ ಕಾದು ಬಿಸಿಯಾದಾಗ ಅದರ ರೋಧತ್ವ ಬದಲಾಗುತ್ತದೆ. ವಿದ್ಯುದ್ದೀಪದ ಬರುಡೆಯೊಳಗಿರುವ ತಂತು ಉರಿಯುತ್ತಿರುವಾಗ ಅದರ ರೋಧತ್ವದಲ್ಲಾಗುವ ವ್ಯತ್ಯಾಸ ಎದ್ದುಕಾಣುತ್ತದೆ. ಟಂಗ್ಸ್ಟನ್ ತಂತುವಿನಲ್ಲಿ ವಿದ್ಯುತ್ಪ್ರವಾಹ ಹೆಚ್ಚಿದಂತೆ ರೋಧತ್ವ ಹೆಚ್ಚಾಗುವುದರಿಂದ ಪ್ರಯುಕ್ತವಾದ ವೋಲ್ಟೇಜಿನೊಡನೆ ವಿದ್ಯುತ್ಪ್ರವಾಹದ ಏರುವಿಕೆ ಕುಂಠಿತವಾಗುತ್ತದೆ. ಉಷ್ಣತೆ ಏರುವುದಕ್ಕಿಂತ ಮುಂಚೆ ಆಗುತ್ತಿದ್ದ ಹಾಗೆ ಶೀಘ್ರವಾಗಿ ಅದು ಏರುವುದಿಲ್ಲ. ಆದರೆ ಅರ್ಧವಾಹಕಗಳನ್ನು ಉನ್ನತ ಉಷ್ಣತೆಗಳಿಗೆ ಏರಿಸಿದಾಗ ಅವುಗಳ ರೋಧತ್ವ ತಗ್ಗುವುದಲ್ಲದೆ ಪ್ರಯುಕ್ತ ವೋಲ್ಟೇಜಿನೊಡನೆ ವಿದ್ಯುತ್ಪ್ರವಾಹದ ಪ್ರಮಾಣ ರೇಖೀಯವಾಗಿ ಹೆಚ್ಚುವುದಕ್ಕಿಂತ ಶೀಘ್ರವಾಗಿ ಹೆಚ್ಚುತ್ತದೆ.
 (2) ವಿದ್ಯುನ್ಮಂಡಲದಲ್ಲಿರುವ ಬೇರೆ ಬೇರೆ ಅವಯವಗಳು ಪರ್ಯಾಯ ವಿದ್ಯುತ್ಪ್ರವಾಹಕ್ಕೆ ಯಾವುದಾದರೊಂದು ಉಷ್ಣತೆಯಲ್ಲಿ ತೋರಿಸುವ ರೋಧತ್ವ ವಿದ್ಯುತ್ಪ್ರವಾಹದ ಪ್ರಮಾಣ, ಅದರ ಆವರ್ತನ ಸಂಖ್ಯೆ ಇವೆರಡರ ಉತ್ಪನ್ನ.
 (3) ವೋಲ್ಟೇಜ್ ಹೆಚ್ಚಿದಂತೆ ವಿದ್ಯತ್ಪ್ರವಾಹಕಗಳ ಸಂಖ್ಯೆ ಹೆಚ್ಚಾಗುವಂತೆ ಅಯಾನುಗಳಿರುವ ಅನಿಲಗಳಲ್ಲಿ ವಿದ್ಯುತ್ಪ್ರವಾಹದ ಪ್ರಮಾಣ ವೋಲ್ಟೇಜಿನೊಡನೆ ರೇಖೀಯವಾಗಿ ಏರುವುದಕ್ಕಿಂತ ಇನ್ನೂ ವೇಗವಾಗಿ ಹೆಚ್ಚುತ್ತದೆ.
 (4) ಟ್ರಯೋಡಿನಲ್ಲಿ (ಟ್ರಯೋಡ್ ವ್ಯಾಕೂಂ ಟ್ಯೂಬ್) ಉತ್ಪನ್ನವಾಗುವ ವಿದ್ಯುತ್ಪ್ರವಾಹದ ಎಷ್ಟು ಪ್ರಮಾಣವು ಫಲಕವನ್ನು (ಪ್ಲೇಟ್) ತಲುಪುತ್ತದೆಂಬುದು ಜಾಲ (ಗ್ರಿಡ್) ಕೊಡುವ ಪ್ರೋತ್ಸಾಹಕ್ಕನುಗುಣವಾಗಿರುತ್ತದೆ. ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಫಲಕಕ್ಕೆ ಪ್ರಯೋಗಿಸಿರುವ ವೋಲ್ಟೇಜನ್ನು ಗಮನಾರ್ಹವಾಗಿ ಬದಲಾಯಿಸದೆ ಫಲಕವನ್ನು ತಲಪುವ ವಿದ್ಯುತ್ಪ್ರವಾಹದ ಪ್ರಮಾಣವನ್ನು ಹೆಚ್ಚಿಸಬಹುದು. ಅಂಥ ಸಂದರ್ಭಗಳಲ್ಲಿ ಟ್ರಯೋಡಿನ ಪ್ರಭಾವೀ ರೋಧತ್ವ (ಎಫಿಕ್ಟಿವ್ ರೆಸಿಸ್ಟೆನ್ಸ್‌) ಉಪಸಮವಾಗಿ ಸೊನ್ನೆಯಾಗುತ್ತದೆ. 
 (5) ಅರೆವಾಹಕಗಳಲ್ಲಿ ದೊರೆಯುವಂಥ ವಿದ್ಯುದಾವೇಶಗಳನ್ನು (ಎಲೆಕ್ಟ್ರಿಕ್ ಚಾರ್ಜಸ್) ಹರಿಸಿದ ಮೇಲೆ ಪ್ರಯೋಗಿಸುತ್ತಿರುವ ವೋಲ್ಟೇಜನ್ನು ಹೆಚ್ಚಿಸಿದರೆ, ಪ್ರತಿಯೊಂದು ಸಲವೂ ಉಂಟಾಗುವ ವಿದ್ಯುತ್ಪ್ರವಾಹ ವೋಲ್ಟೇಜಿನ ಹೆಚ್ಚುವರಿಗೆ ಸರಳಾನುಪಾತದಲ್ಲಿರುವುದಿಲ್ಲ.
ಮೇಲೆ (3), (4), (5)ರಲ್ಲಿ ತಿಳಿಸಿರುವಂತೆ ವರ್ತಿಸುವ ವಿದ್ಯುನ್ಮಂಡಲದ ಅವಯವಗಳನ್ನು ನಾನ್ಓಮಿಕ್ ಅವಯವಗಳೆನ್ನುತ್ತೇವೆ. ಎಲೆಕ್ಟ್ರಾನಿಕ್ಸಿನಲ್ಲಿ ಈ ಅವಯವಗಳಿಗೆ ಪ್ರಮುಖವಾದ ಉಪಯೋಗಗಳುಂಟು.

ಪರ್ಯಾಯ ವಿದ್ಯುನ್ಮಂಡಲಗಳಲ್ಲಿ ಉಪಯೋಗಿಸುವ ಪ್ರೇರಕತ್ವ (ಇಂಡಕ್ಷನ್ಸ್‌), ಸಂಗ್ರಾಹಕ (ಕೆಪಾಸಿಟರ್)-ಈ ರೀತಿಯ ಅವಯವಗಳನ್ನು ನಾನ್ಓಮಿಕ್ ಅವಯವಗಳೆನ್ನುತ್ತೇವೆ. (q) ಎಂಬುದು ವಿದ್ಯುದಾವೇಶವಾದರೆ ಯಾವುದಾದರೊಂದು ರೋಧತ್ವದ ತುದಿಗಳಲ್ಲಿರುವ ವೋಲ್ಟೇಜ್ vಯನ್ನು  ಎಂದೂ (ಐ) ಪ್ರೇರಕತ್ವದ ತುದಿಗಳಲ್ಲಿರುವ ವೋಲ್ಟೇಜನ್ನು  ಎಂದೂ ಒಂದು ಸಂಗ್ರಾಹಕ ಫಲಕಗಳ ನಡುವೆ ಇರುವ ವೋಲ್ಟೇಜ್ ಗಿ ಯನ್ನು  ಎಂದೂ ಬರೆಯಬಹುದು. ಇಲ್ಲಿ ಛಿ ಎಂಬುದು ಸಂಗ್ರಾಹಕದ ಸಂಗ್ರಾಹಕತ್ವವೆನಿಸಿಕೊಳ್ಳುತ್ತದೆ.	(ಸಿ.ಕೆ.ವಿ.; ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ